Chairman's Message

Shri. Kodandera P Ganapathy

ಅಧ್ಯಕ್ಷರ ಮನದಾಳದಿಂದ.....

ಆತ್ಮೀಯರೇ,

“ಒಟ್ಟಿಗೆ ಬರುವುದು ಪ್ರಾರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ವಿಜಯ” ಎಂಬಂತಹ ಶ್ರೇಷ್ಟ ಸಹಕಾರ ತತ್ವಗಳ ಅಡಿಪಾಯದ ಮೇಲೆ, ಸತ್ಯ, ನಿಷ್ಠೆ ಪ್ರಾಮಾಣಿಕತೆಯೊಂದಿಗೆ 1921ನೇ ಇಸವಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿರುವ ಕೊಡಗಿನ ಹಿರಿಯ ಮಹಾನ್ ಸಹಕಾರಿ ಚಿಂತಕ ಚೇತನಗಳನ್ನು ನೆನೆಯುತ್ತಾ, ಅಂದಿನಿಂದ ಇಂದಿನ ವರೆಗೆ ಹಲವಾರು ಹಿರಿಯ ಸಹಕಾರಿ ಚಿಂತಕರು ನಡೆಸಿದ ಧಕ್ಷ ಆಡಳಿತ, ಪ್ರಜ್ಞಾವಂತ ಸದಸ್ಯ ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸ, ನಿಷ್ಠಾವಂತ ಸಿಬ್ಬಂದಿಗಳು ಸಲ್ಲಿಸಿರುವ ಸೇವೆಯಿಂದ ಇಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ತನ್ನ ಪಾರದರ್ಶಕ ಸೇವೆಯೊಂದಿಗೆ ಕೊಡಗು ಜಿಲ್ಲೆಯ ಸಹಕಾರ ರಂಗದಲ್ಲಿ ದೃತಿಗೆಡದೆ ಕೃಷಿ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದು, 103 ವರ್ಷಗಳ ಯಶಸ್ವಿ ಮುನ್ನಡೆಯೊಂದಿಗೆ, ಹೆಮ್ಮರವಾಗಿ ಬೆಳೆದು ಶತಮಾನವನ್ನು ಪೂರೈಸಿರುತ್ತದೆ.

“ತಾನು ಪರರಿಗೆ-ಪರರಿಂದ ತನಗೆ” ಎಂಬ ಧ್ಯೇಯವಾಕ್ಯದೊಂದಿಗೆ ಭದ್ರವಾದ ಸಹಕಾರ ತತ್ವಗಳ ಅಡಿಪಾಯದ ಮೇಲೆ ಕಟ್ಟಿರುವ ಸಹಕಾರ ಕ್ಷೇತ್ರವು ಪರಸ್ಪರ ಸಹಕಾರದಿಂದ ಪಾರದರ್ಶಕ ಹಾಗೂ ನಿಸ್ವಾರ್ಥ ಸೇವೆಯಿಂದ ಸಹಕಾರ ಸಂಸ್ಥೆಗಳ ಪ್ರಗತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತದೆ.

   ತಮ್ಮೆಲ್ಲರ ಹೆಮ್ಮೆಯ “ಕೊಡಗು ಜಿಲ್ಲಾ ಸಹಕಾರ ಬ್ಯಾಂಕು” ಜಿಲ್ಲೆಯ ರೈತರ ಹಲವಾರು ರಚನಾತ್ಮಕ ಚಟುವಟಿಕೆಗಳ ಕೇಂದ್ರ ಬಿಂದು ಆಗಿದ್ದು, 2019 ನೇ ಸಾಲಿನಿಂದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷನಾಗಿ ನಿಸ್ವಾರ್ಥದಿಂದ ಪಾರದರ್ಶಕ, ಪ್ರಾಮಾಣಿಕ ಆಡಳಿತವನ್ನು ನಡೆಸಲು ನಿಮ್ಮೆಲ್ಲರ ಸಲಹೆ ಸಹಕಾರವನ್ನು ಬಯಸುತ್ತೇನೆ.

“ಜೈ-ಸಹಕಾರ”

 

                                                                                                                                                                 ಶ್ರೀ ಕೊಡಂದೇರ ಪಿ ಗಣಪತಿ
                                                                                                                                                                    ಅಧ್ಯಕ್ಷರು,
                                                                                                                                                  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ,
                                                                                                                                                             ಮಡಿಕೇರಿ – ಕೊಡಗು.